ನಮ್ಮ ಬಗ್ಗೆ
ರಾಷ್ಟ್ರ ಬಂಧು, ರಾಷ್ಟ್ರೀಯ ಯುವ ಸಂತ ಶ್ರೀ ರಾಜೀವ ದೀಕ್ಷಿತ ರ "ಸ್ವದೇಶಿ" ಕನಸುಗಳನ್ನು ನನಸು ಮಾಡಲು ಅವಿರತವಾಗಿ ಶ್ರಮವಹಿಸಿರುವ ಜಿಲ್ಲಾಮಟ್ಟದ ರಾಜ್ಯ ಮತ್ತು ರಾಷ್ಟ್ರಮಟ್ಟದ ಗುಂಪು. ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕಮತ್ತು ರಾಜಕೀಯ ವಲಯಗಳನ್ನು ಕ್ಷೀಪ್ರವಾಗಿ ತನ್ನ ತೆಕ್ಕೆಗೆ ತೆಗೆದು ಕೊಳ್ಳುತ್ತಿರುವ ಪಾಶ್ಚಿಮಾತ್ಯ ನೀತಿ ರೀತಿಗಳನ್ನು "ದೇಸಿ"ಯತೆಯ ತರ್ಕ ಸಿದ್ದಾಂತಗಳ ಆಧಾರದ ಮೇಲೆ ಉಳಿಸಿ ಬೆಳೆಸಲು ಹಗಲಿರುಳು ಚಿಂತನ- ಮಂಥನ, ಕಾರ್ಯ-ಕಾರ್ಯಗಾರ ತರಬೇತಿ-ಪ್ರಚಾರ ಓದು-ಬರಹ ಮಾಡುತ್ತಿರುವ ಸಮಾನ ಮನಸ್ಕ ದೇಶಭಕ್ತರ ಕಾರ್ಯಪಡೆ.
ದೂರದೃಷ್ಟಿ : (Vision)
ಜಗತ್ತಿನ ಕಲ್ಯಾಣ, ಮಾನವ ಧರ್ಮದ ಏಳಿಗೆ ಭೂಮಂಡಲದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡುವುದು.
ಧೇಯ: (Mission)
ಭಾರತವನ್ನು ಭಾರತೀಯತೆಯ ಆಧಾರದ ಮೇಲೆ ಪುನರುತ್ಥಾನ ಮತ್ತು ಪುನರ್ ನಿರ್ಮಾಣ ಮಾಡುವುದು. ರಾಜೀವ್ ದೀಕ್ಷಿತ ಸಂಕಲ್ಪವನ್ನು ಸಿದ್ಧಿಗೊಳಿಸುವುದು.
ಉದ್ದೇಶ : (Objective)
ವಿದೇಶಿಯಿಂದ ಸ್ವದೇಶಿಯತ್ತ ಮತ್ತು ಸ್ವದೇಶಿಯಿಂದ "ದೇಸೀ"ಯತ್ತ ನಮ್ಮ ಚಿತ್ತ.